ಮಹಾಧನ ಸೊಲುಟೇಕ್ ಟೊಮೇಟೊ
- ಮಹಾಧನ ಸೊಲುಟೇಕ್ ಟೊಮೇಟೊ ಎಂದು ಕರೆಯಲ್ಪಡುವ ಈ ರಸಗೊಬ್ಬರಗಳನ್ನು ಟೊಮೆಟೊ ಬೆಳೆಗೆ ಬೆಳವಣಿಗೆಯ ಹಂತಕ್ಕೆ ಅನುಗುಣವಾಗಿ, 3
ಬೆಳೆವಣಿಗೆಯ ಹಂತದ ನಿರ್ದಿಷ್ಟ ಉತ್ಪನ್ನವಾಗಿವೆ. - ಈ ಉತ್ಪನ್ನಗಳು ಶೇ. 100 ರಷ್ಟು ನೀರಿನಲ್ಲಿ ಕರಗುತ್ತವೆ ಮತ್ತು ಡ್ರಿಪ್ ನಲ್ಲಿ ಬಳಸಬಹುದಾಗಿದೆ.
- ಈ ಉತ್ಪನ್ನಗಳು ಕಡಿಮೆ pH (ರಸಸಾರ) ಅನ್ನು ಹೊಂದಿರುತ್ತವೆ ಮತ್ತು ಇವು ಕ್ಲೋರೈಡ್ ಮುಕ್ತವಾಗಿವೆ.
ಶ್ರೇಣಿ | ಸಂಯೋಜನೆ | ಬೆಳೆಯ ಹಂತ | ಬಳಸುವ ಸಮಯ (ನಾಟಿ ಮಾಡಿದ ದಿನಗಳ ನಂತರ) | ಪ್ರಮಾಣ (ಕೆಜಿ/ಎಕರೆ) |
---|---|---|---|---|
ಸೊಲುಟೆಕ್ ಟೊಮೇಟೊ ಗ್ರೇಡ್ 1 | 17:14:9+TE | ಬೆಳವಣಿಗೆ ಹಂತ | 11-50 | 55 ಕೆಜಿ |
ಸೊಲುಟೆಕ್ ಟೊಮೇಟೊ ಗ್ರೇಡ್ 2 | 13:12:19+TE | ಹೂವು ಹಾಗು ಕಾಯಿ ಕಟ್ಟುವ ಹಂತ | 51 – 75 | 55 ಕೆಜಿ |
ಸೊಲುಟೆಕ್ ಟೊಮೇಟೊ ಗ್ರೇಡ್ 3 | 9:8:28+TE | ಕಾಯಿ ಬಲಿಯುವಿಕೆ ಹಾಗು ಕಟಾವು | 76-120 & ದಿನಗಳ ನಂತರ | 55 ಕೆಜಿ |
- N, P, K, ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಚೀಲೇಟೆಡ್ ರೂಪದಲ್ಲಿ ಟೊಮೇಟೊ ಬೆಳೆಯ ಬೆಳವಣಿಗೆಯ ಹಂತವಾರು ಅವಶ್ಯಕತೆಯ ಪ್ರಕಾರ ಒಳಗೊಂಡಿದೆ.
- ಇದು ಬೆಳೆ ಮತ್ತು ಬೆಳವಣಿಗೆಯ ಹಂತಕ್ಕೆ ನಿರ್ದಿಷ್ಟವಾಗಿ ಕಸ್ಟಮೈಸ್ ಮಾಡಿದ ಪೋಷಕಾಂಶದ ಪರಿಹಾರವಾಗಿದೆ
- ಇದು ಟೊಮೇಟೊ ಬೆಳೆಯ ವಿವಿಧ ಹಂತಗಳಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸುತ್ತದೆ.
- ಬೆಳೆಗಳ ಆರಂಭಿಕ ಬೆಳವಣಿಗೆಯನ್ನು ತ್ವರಿತ ಗೊಳಿಸಿ ಮತ್ತು ಬೆಳೆಯ ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
- ಹೇರಳವಾಗಿ ಹೂವು ಬಿಡಲು, ಕಾಯಿ ಕಟ್ಟಲು ಮತ್ತು ಸಾಕಷ್ಟು ಹಣ್ಣುಗಳನ್ನು ಪಡೆಯಲು ಸಹಾಯ ಮಾಡುತ್ತದೆ
- ಹೆಚ್ಚಿನ ಸಂಖ್ಯೆಯ ಕೊಯ್ಲುಗಳು (ಒಟ್ಟಾರೆ 25-30 ಕೊಯ್ಲುಗಳು)
- ಹೆಚ್ಚು ಹೊಳಪು ಹೊಂದಿರುವ ಹಣ್ಣುಗಳು
- ಹೆಚ್ಚಿನ ಇಳುವರಿ (ಶೇ. 15-20 ರಷ್ಟು)