ಮಹಾಧನ ಸೊಲುಟೇಕ್ ದ್ರಾಕ್ಷಿ
- ವಿಶೇಷವಾಗಿ ಮಹಾಧನ ಸೊಲುಟೇಕ್ ದ್ರಾಕ್ಷಿ ಎನ್ನುವ ನೀರಿನಲ್ಲಿ ಕರಗುವ ಈ ರಸಗೊಬ್ಬರಗಳನ್ನು ದ್ರಾಕ್ಷಿ ಬೆಳೆಗೆ 3 ಹಂತದ ಬೆಳೆಯ ಬೆಳವಣಿಗೆಯ ಅನುಸಾರ
ತಯಾರಿಸಲಾದ ಗೊಬ್ಬರಗಳಾಗಿವೆ. - ಈ ರಸಗೊಬ್ಬರಗಳು ಶೇ. 100 ರಷ್ಟು ನೀರಿನಲ್ಲಿ ಕರಗುತ್ತವೆ ಮತ್ತು ಡ್ರಿಪ್ ಮೂಲಕ ಬಳಸಬಹುದಾಗಿದೆ.
- ಈ ರಸಗೊಬ್ಬರಗಳು ಕಡಿಮೆ pH (ರಸಸಾರ) ಅನ್ನು ಹೊಂದಿರುತ್ತವೆ ಮತ್ತು ಇವುಗಳು ಕ್ಲೋರೈಡ್ ಮುಕ್ತವಾಗಿರುತ್ತವೆ.
- ಇವುಗಳನ್ನು ಏಪ್ರಿಲ್ ಮತ್ತು ಅಕ್ಟೋಬರ್ ಚಾಟನಿಯ ನಂತರ ಎರಡೂ ಸಮಯದಲ್ಲೂ ಬಳಸಬಹುದು.
ಏಪ್ರಿಲ್ ಚಾಟನಿಯ ನಂತರ ಪೋಷಕಾಂಶ ನಿರ್ವಹಣೆ
ಉತ್ಪನ್ನ | ಕಂಪೋಸಿಷನ್ | ಬೆಳೆಯ ಬಳವಣಿಗೆ ಹಂತ | ಬಳಸುವ ಸಮಯ (ಚಾಟನಿ ಮಾಡಿದ ದಿನಗಳ ನಂತರ) | ಡೋಸ್ / ಅಪ್ಲಿಕೇಶನ್ / ಎಕರೆ | ಪ್ರಮಾಣ (ಕೆಜಿ ಪ್ರತಿ ಎಕರೆಗೆ) |
---|---|---|---|---|---|
ಸೊಲುಟೆಕ್ ದ್ರಾಕ್ಷಿ ಗ್ರೇಡ್ 2 | 6:34:17+TE | ಬೆಳೆಯ ಆರಂಭಿಕ ಬೆಳವಣಿಗೆ ಮತ್ತು ಕಾಂಡದ ಅಭಿವೃದ್ಧಿ | 10-65 | 5.5 ಕೆಜಿ | 77 ಕೆಜಿ |
ಸೊಲುಟೆಕ್ ದ್ರಾಕ್ಷಿ ಗ್ರೇಡ್ 3 | 6:00:37:16+TE | ಕಾಂಡದ ಅಭಿವೃದ್ಧಿ ಮತ್ತು ಮಾಗುವಿಕೆ | 66-95 | 6.5 ಕೆಜಿ | 55 ಕೆಜಿ |
ಅಕ್ಟೋಬರ್ ಚಾಟನಿಯ ನಂತರ ಪೋಷಕಾಂಶ ನಿರ್ವಹಣೆ
ಉತ್ಪನ್ನ | ಕಂಪೋಸಿಷನ್ | ಬೆಳೆಯ ಬಳವಣಿಗೆ ಹಂತ | ಬಳಸುವ ಸಮಯ (ಚಾಟನಿ ಮಾಡಿದ ದಿನಗಳ ನಂತರ) | ಪ್ರಮಾಣ (ಕೆಜಿ ಪ್ರತಿ ಎಕರೆಗೆ) |
---|---|---|---|---|
ಸೊಲುಟೆಕ್ ದ್ರಾಕ್ಷಿ ಗ್ರೇಡ್ 1 | 15:28:06+TE | ಸಸ್ಯ ಬೆಳವಣಿಗೆ ಮತ್ತು ಹೂವು ಬಿಡುವ ಹಂತ | 10-35 | 55 ಕೆಜಿ |
ಸೊಲುಟೆಕ್ ದ್ರಾಕ್ಷಿ ಗ್ರೇಡ್ 2 | 6:34:17+TE | ಕಾಯಿ ಕಟ್ಟುವ ಮತ್ತು ಕಾಯಿ ಬೆಳವಣಿಗೆ ಹಂತ | 36-85 | 77 ಕೆಜಿ |
ಸೊಲುಟೆಕ್ ದ್ರಾಕ್ಷಿ ಗ್ರೇಡ್ 3 | 6:00:37:16+TE | ಹಣ್ಣು ಮಾಗುವ ಮತ್ತು ಕೊಯ್ಲು ಮಾಡುವ ಹಂತ | 86 -120 | 44 ಕೆಜಿ |
- ಇದು N,P,K , ದ್ವಿತೀಯ ಮತ್ತು ಲಘು ಪೋಷಕಾಂಶಗಳನ್ನು ಚೀಲೇಟೆಡ್ ರೂಪದಲ್ಲಿ ಬೆಳೆ ಮತ್ತು ಅವುಗಳ ಬೆಳವಣಿಗೆ ಹಂತವಾರು ಅವಶ್ಯಕತೆಗೆ ಅನುಗುಣವಾಗಿ ಒಳಗೊಂಡಿದೆ.
- ಇದು ಬೆಳೆ ಮತ್ತು ಬೆಳೆಯ ಬೆಳವಣಿಗೆ ಹಂತಕ್ಕೆ ಅನುಗುಣವಾಗಿ ನಿರ್ದಿಷ್ಟ ಕಸ್ಟಮೈಸ್ ಮಾಡಿದ ಪೋಷಕಾಂಶದ ಪರಿಹಾರವಾಗಿದೆ.
- ಇದು ದ್ರಾಕ್ಷಿ ಬೆಳೆಯ ವಿವಿಧ ಬೆಳವಣಿಗೆ ಹಂತಗಳಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸುತ್ತದೆ.
ಏಪ್ರಿಲ್ ಚಾಟನಿಯ ನಂತರ ಈ ಗೊಬ್ಬರ ಬಳಸಿದ ಬೆಳೆಯಲ್ಲಿ
- ಸಮತೋಲಿತ ಮತ್ತು ಆರೋಗ್ಯಕರ ಬೆಳೆಯ ಬೆಳವಣಿಗೆ
- ಏಕರೂಪದ ಬಳ್ಳಿಯ ಅಭಿವೃದ್ಧಿ
- ಹೆಚ್ಚು ಬಳ್ಳಿಯ ಸುತ್ತಳತೆ
- ಹೆಚ್ಚು ಸಂಖ್ಯೆಯ ಗೆಣ್ಣುಗಳು ಮತ್ತು ಕಡಿಮೆ ಗೆಣ್ಣುಗಳ ಅಂತರ
- ಏಕರೂಪದ ಬಳ್ಳಿಯ ಪಕ್ವತೆ
- ಹೆಚ್ಚು ಸಾಂಕ್ಯೆಯ ಫಲಭರಿತ ಮೊಗ್ಗುಗಳು
ಅಕ್ಟೋಬರ್ ಚಾಟನಿಯ ನಂತರ ಈ ಗೊಬ್ಬರ ಬಳಸಿದ ಬೆಳೆಯಲ್ಲಿ
- ಸಮತೋಲಿತ ಮತ್ತು ಆರೋಗ್ಯಕರ ಬೆಳೆಯ ಬೆಳವಣಿಗೆ
- ಹೆಚ್ಚಿನ ಹೂವು ಕಟ್ಟುವಿವೆ
- ಹೆಚ್ಚಿನ ಕಾಯಿ ಕಟ್ಟುವಿಕೆ
- ಏಕರೂಪದ ಕಾಯಿಯ ಬೆಳವಣಿಗೆ
- ಹೆಚ್ಚಿನ ಕಾಯಿಯ ಹೊಳಪು
- ಹೆಚ್ಚಿನ TSS
- ರಫ್ತು ಮಾಡಬಹುದಾದ ಗುಣಮಟ್ಟದೊಂದಿಗೆ ಇಳುವರಿಯಲ್ಲಿ ಹೆಚ್ಚಳ (ಶೇ. 15-20 ರಷ್ಟು).