Mahadhan - Grass-Roots Touch, Nourishing And Enriching Lives

ನಮ್ಮ ಬಗ್ಗೆ

ಮಹಾಧನ ಮಡಿಲಿಗೆ ಸಂದಿರುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಕೆಲವು ಯಾವುವೆಂದರೆ:

1992 ರಲ್ಲಿ, ದೀಪಕ್ ಫರ್ಟಿಲೈಸರ್ಸ್ ಅಂಡ್ ಪೆಟ್ರೋಕೆಮಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್ (DFPCL) ರಸಗೊಬ್ಬರದ ಉದ್ಯಮದಲ್ಲಿ ತನ್ನ ವಿಸ್ತರಣೆಯನ್ನು ಪ್ರಾರಂಭಿಸಿತು. ಇಂದು DFPCLನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಮಹಾಧನ ಅಗ್ರಿಟೆಕ್ ಲಿಮಿಟೆಡ್ (ಈ ಹಿಂದೆ ಇದನ್ನು ಸ್ಮಾರ್ಟ್‌ಕೆಮ್ ಟೆಕ್ನಾಲಜೀಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಕಂಪನಿಯು, ಪ್ರಮುಖ (ಬಲ್ಕ್ ಫರ್ಟಿಲೈಜರ್) ಹಾಗೂ ವಿಶಿಷ್ಟ ರಸಗೊಬ್ಬರಗಳ ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ಉತ್ಪಾದಕರಲ್ಲಿ ಒಂದಾಗಿದೆ. ಈ ಕಂಪನಿಯ ರಸಗೊಬ್ಬರಗಳನ್ನು ಅದರ ಪ್ರಮುಖ ಬ್ರ್ಯಾಂಡ್ ಮಹಾಧನ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಗ್ರಾಮೀಣ ಭಾರತದ ರೈತರಿಗೆ ಕೃಷಿ ವ್ಯವಹಾರದ ಅನುಭವವನ್ನು ಸರಳೀಕರಿಸುವ ಉದ್ದೇಶದಿಂದ, ಎಲ್ಲಾ ಕೃಷಿ ಸಂಬಂಧಿತ ಅವಶ್ಯಕತೆಗಳಿಗೆ ನವೀನ ಪರಿಹಾರಗಳನ್ನು ಒದಗಿಸಲು ಮಹಾಧನ ಬ್ರ್ಯಾಂಡ್ ಅನ್ನು ನಿರ್ಮಿಸಲಾಗಿದೆ.

ತಾಂತ್ರಿಕ ನಾವೀನ್ಯತೆಯಿಂದ ವರ್ಧಿಸಲ್ಪಟ್ಟ ರಾಸಾಯನಿಕ ಜ್ಞಾನದ ಘನ ಅಡಿಪಾಯದಿಂದಾಗಿ ಮಹಾಧನ ಒಂದು ಸ್ಥಳೀಯ ಬ್ರ್ಯಾಂಡ್‌ನಿಂದ ಒಂದು ಪ್ರಾದೇಶಿಕ ಮತ್ತು ರಾಷ್ಟ್ರೀಯ ಬ್ರ್ಯಾಂಡ್ ಆಗಿ ಬೆಳೆದಿದೆ. ತನ್ನ ಪ್ರಯಾಣದಾದ್ಯಂತ ಈ ಬ್ರ್ಯಾಂಡ್ ಸಾಮಾನ್ಯ ಜನತೆಯ ಸ್ಪರ್ಶವನ್ನು ಕಾಪಾಡಿಕೊಂಡಿದೆ ಮತ್ತು “ಒಂದು ಅನನ್ಯ ಸಂಬಂಧ (ಎ ಬಾಂಡ್ ಆಫ್ ಲೈಫ್)” ಎಂಬ ಧ್ಯೇಯವಾಕ್ಯಕ್ಕೆ ತಕ್ಕಂತೆ ನಡೆದುಕೊಂಡು ಬಂದಿದೆ. ಈ ಸಂಪರ್ಕವು ಗಹನವಾದ ಮಾರುಕಟ್ಟೆ ಜ್ಞಾನ ಮತ್ತು ರೈತರ ವಿಶ್ವಾಸವನ್ನು ಗಳಿಸಲು ಸಹಕಾರಿಯಾಗಿದೆ.

ಅತ್ಯಧಿಕ ಮಟ್ಟದಲ್ಲಿ ಏಕರೂಪಗೊಳಿಸಲ್ಪಟ್ಟಿರುವ ರಸಗೊಬ್ಬರ ಮಾರುಕಟ್ಟೆಯಲ್ಲಿ, ಅದರ ಸುಸ್ಥಿರ ಗುಣಮಟ್ಟ ಮತ್ತು ವಿಭಿನ್ನ ಉತ್ಪನ್ನಗಳನ್ನು ಆವಿಷ್ಕರಿಸುವ ಮತ್ತು ತಯಾರಿಸುವ ವಿಶಿಷ್ಟ ಸಾಮರ್ಥ್ಯಕ್ಕಾಗಿ ಮಹಾಧನ ಮಾನ್ಯತೆ ಪಡೆದಿದೆ.

  • 2017 ನೇ ಸಾಲಿನಲ್ಲಿ ಐಕಾನಿಕ್ ಇಟಿ (ET ) ಪ್ರಶಸ್ತಿ.
  • 2016 ನೇ ಸಾಲಿನಲ್ಲಿ ಕೃಷಿ ಪದ್ಧತಿಗಳಲ್ಲಿ ಶ್ರೇಷ್ಠತೆ ಪ್ರಶಸ್ತಿ.
  • 2015 ಮತ್ತು 2016 ನೇ ಸಾಲಿನಲ್ಲಿ ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ನಮ್ಮ ಕಂಪನಿಯು ತಲೋಜಾದಲ್ಲಿರುವ ನಮ್ಮ ಹೊಸ ಉತ್ಪಾದನಾ ಸ್ಥಾವರದಲ್ಲಿ ಅಂತಾರಾಷ್ಟ್ರೀಯ INCRO ತಂತ್ರಜ್ಞಾನ ಹೊಂದಿರುವ
ಉತ್ಪಾದನಾ ಘಟಕವನ್ನು ಪ್ರಾರಂಭಿಸಿದೆ. ತಾಂತ್ರಿಕತೆ ಸಂಬಂಧಿತ ನಾವೀನ್ಯತೆಯು ಕಂಪನಿಯ ಅವಿಭಾಜ್ಯ ಅಂಗವಾಗಿದೆ; ತನ್ನದೇ ಆದ
ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದಲ್ಲಿ ಮತ್ತು ಭಾರತೀಯ ಹಾಗೂ ಅಂತರಾಷ್ಟ್ರೀಯ ಸಹಯೋಗಿಗಳೊಂದಿಗೆ
ಪಾಲುದಾರಿಕೆಯನ್ನು ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು (ಟೆಕ್ನಾಲಜಿ ಟ್ರಾನ್ಸ್‌ಫರ್) ಮಾಡುತ್ತಿದೆ.

ಭವಿಷ್ಯದಲ್ಲಿ 10 ಮಿಲಿಯನ್ ರೈತರಿಗೆ ಉತ್ಪಾದಕತೆಯನ್ನು ಉತ್ತಮಗೊಳಿಸಲು ನಮ್ಮ ಮುಂದಿರುವ ಯೋಜನೆಗಳು

  • ಉತ್ಪಾದನೆಯಲ್ಲಿ ಹೆಚ್ಚಳ – ಹೊಸ ಉತ್ಪಾದನಾ ಘಟಕವು, ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಮೂರು
    ಪಟ್ಟಿಗಿಂತ ಅಧಿಕ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ಇದು ನಿರಂತರ ಪೂರೈಕೆಯನ್ನು ಖಾತರಿಪಡಿಸಿದೆ (ಕಾಂಪ್ಲೆಕ್ಸ್ ರಸಗೊಬ್ಬರ ಶ್ರೇಣಿಗಳ ಬಲವರ್ಧಕ ಮತ್ತು ಲೇಪಿತ (ಕೋಟೆಡ್) ಉತ್ಪನ್ನಗಳು ಸೇರಿದಂತೆ ವಾರ್ಷಿಕವಾಗಿ ಎಂಟು
    ಲಕ್ಷ ಟನ್ನುಗಳ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ)
  • ವಿಶಾಲವಾದ ಭೌಗೋಳಿಕ ವ್ಯಾಪ್ತಿ ಮತ್ತು ಉತ್ಪನ್ನಗಳ ನಿರಂತರ ಲಭ್ಯತೆ – ವಿಸ್ತರಿಸುತ್ತಿರುವ ಡೀಲರ್ ನೆಟ್‌ವರ್ಕ್, ಭೌಗೋಳಿಕವಾಗಿ ಅಧಿಕ ಪ್ರದೇಶಗಳಲ್ಲಿ ವಿಸ್ತರಿಸಲು ಮತ್ತು ಗ್ರಾಹಕರಿಗೆ ಸುಲಭ ಮತ್ತು ಸ್ಥಳೀಯವಾಗಿ ನಮ್ಮ ಉತ್ಪನ್ನಗಳನ್ನು ಲಭ್ಯವಾಗಿಸುವುದನ್ನು ಇದು ಸಾಧ್ಯಗೊಳಿಸುತ್ತದೆ
  • ಸಂಪೂರ್ಣ ಪೋಷಕಾಂಶಗಳ ಪರಿಹಾರ – ಇಳುವರಿಯನ್ನು ಗರಿಷ್ಠಗೊಳಿಸಲು ನಾವು ಅನೇಕ ಗುರಿಗಳನ್ನು
    ಹೊಂದಿದ್ದು ಅದರಂತೆ ನಿರ್ದಿಷ್ಟ ಬೆಳಗಳಿಗೆ ಬೆಳೆ ನಿರ್ದಿಷ್ಟ ರಸಗೊಬ್ಬರ ಮತ್ತು ಪೋಷಕಾಂಶಗಳ ಸಂಯೋಜನೆಯೊಂದಿಗೆ
    ಪೋಷಕಾಂಶಗಳ ಪರಿಹಾರವನ್ನು ಅಭಿವೃದ್ಧಿ ಪಡಿಸಲಾಗಿದೆ.
  • ಜನರೊಂದಿಗೆ ನಿರಂತರ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸಲು ತಂತ್ರಜ್ಞಾನ – ಬೆಳೆ ಮತ್ತು ಮಾರುಕಟ್ಟೆ
    ಮಾಹಿತಿಯನ್ನು 24×7 ನಿರಂತರವಾಗಿ ಒದಗಿಸಲು ಮಹಾಧನ ಹೂಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
  • ಉತ್ಪನ್ನಗಳ ಸಂಪೂರ್ಣ ಮಾಹಿತಿ
  • ವರ್ಧಿತ ದಕ್ಷತೆಯ ರಸಗೊಬ್ಬರಗಳು:

ಬೆಳೆ ಪೋಷಕಾಂಶದ ಪರಿಹಾರವನ್ನು ಮಹಾಧನ ಅಭಿವೃದ್ಧಿಪಡಿಸಿದೆ.

ಮಹಾಧನ ಕ್ರಾಪ್ಟೆಕ್ ಮತ್ತು ಮಹಾಧನ ಸ್ಮಾರ್ಟೆಕ್‌ ನಂತಹ ನವೀನ ರಸಗೊಬ್ಬರಗಳನ್ನು ಮಹಾಧನ ಕಂಪನಿಯು ಬಿಡುಗಡೆ ಗೊಳಿಸಿದೆ.
ಮೌಲ್ಯವರ್ಧಿತ NPK ಕಾಂಪ್ಲೆಕ್ಸ್ ರಸಗೊಬ್ಬರಗಳಾದ ಸ್ಮಾರ್ಟೆಕ್ ಶ್ರೇಣಿಯನ್ನು ಪ್ರಾರಂಭಿಸಿದ ನಂತರ, ಬೆಳೆ, ಪ್ರದೇಶ ಮತ್ತು ಮಣ್ಣಿನ
ಪರಿಸ್ಥಿತಿಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾದ ಸಂಪೂರ್ಣ ಬೆಳೆ ಪೋಷಕಾಂಶ ಪರಿಹಾರವನ್ನು ಕಂಪನಿಯು ಅಭಿವೃದ್ಧಿಪಡಿಸಿದೆ.
ಮಣ್ಣಿಗೆ ಸೇರಿಸುವ ರಸಗೊಬ್ಬರಗಳ ಶ್ರೇಣಿಗಳಾದ, ಹತ್ತಿ, ಮೆಕ್ಕೆಜೋಳ, ಕಬ್ಬು, ಈರುಳ್ಳಿ, ಅಡಿಕೆ, ಸೋಯಾಬೀನ್‌ನಂತಹ ಬೆಳೆಗಳಿಗಾಗಿ
ಕ್ರಾಪ್ಟೆಕ್ ಎಂಬ ಬ್ರ್ಯಾಂಡ್‌ನ ಅಡಿಯಲ್ಲಿ ಮಹಾಧನ ಬೆಳೆ ನಿರ್ದಿಷ್ಟ ಪೋಷಕಾಂಶದ ಪರಿಹಾರವನ್ನು ಪ್ರಾರಂಭಿಸಿದೆ. “ಸ್ಮಾರ್ಟೆಕ್” ಒಂದು
ಕ್ರಾಂತಿಕಾರಿ ಮತ್ತು ಸಾಂಪ್ರದಾಯಿಕವಲ್ಲದ ರಸಗೊಬ್ಬರವಾಗಿದ್ದು, ಇದು ಮಣ್ಣನ್ನು ಪೋಷಿಸುತ್ತದೆ, ಸಮೃದ್ಧ ಬೇರುಗಳನ್ನು ಬಲಪಡಿಸುತ್ತದೆ
ಮತ್ತು ಬೆಳೆಗಳು ಪೋಷಕಾಂಶ ಹೀರಿಕೊಳ್ಳುವಿಕೆ ಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ.

Open chat
Hello
Can we help you?
Mahadhan SMARTEK