ಮಹಾಧನ (Mahadhan) KTS®

ಮಹಾಧನ KTS® ಕ್ಲೋರೈಡ್-ಮುಕ್ತ ದ್ರವ ರೂಪದ ರಸಗೊಬ್ಬರವಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಹೆಚ್ಚಿನ ದ್ರವ ರೂಪದ ಪೊಟ್ಯಾಸಿಯಮ್ ಮತ್ತು ಗಂಧಕದ ಅಂಶವನ್ನು ಹೊಂದಿರುವ ರಸಗೊಬ್ಬರವಾಗಿದೆ.

  • ಇದನ್ನು ಬೆಲ್ಜಿಯಂ ದೇಶದ ಟೆಸೆಂಡರ್ಲೋ ಕೆರ್ಲಿ ಕಂಪನಿ ತಯಾರಿಸಿದ್ದು, ಮಹಾಧನ ಅಗ್ರಿಟೆಕ್ ಲಿಮಿಟೆಡ್ ಭಾರತೀಯ ರೈತರಿಗಾಗಿ ಆಮದು ಮಾಡಿಕೊಳ್ಳುತ್ತಿದೆ.
  • ಗುಣಮಟ್ಟದ ಹೆಚ್ಚಳ: ಬೆಳೆಯ ಸ್ಥಿರತೆ, ಪ್ರೋಟೀನ್ ಅಂಶ, ಬಣ್ಣ, ಸಿಹಿ ಮತ್ತು ಬಾಳಿಕೆಯನ್ನು ಸುಧಾರಿಸುತ್ತದೆ.
  • ಹೆಚ್ಚಿನ ಪೊಟ್ಯಾಸಿಯಮ್ ಅಂಶವು ಗೊಬ್ಬರದ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಇಳುವರಿ ಪಡೆಯಲು ಸಹಾಯ ಮಾಡುತ್ತದೆ.
  • ಸಾರಜನಕ ಅಥವಾ ಕ್ಲೋರೈಡ್ ಇಲ್ಲದ ಪೊಟ್ಯಾಸಿಯಮ್ ಮತ್ತು ಗಂಧಕದ ದ್ರವ ರೂಪದ ಗೊಬ್ಬರ ಇದಾಗಿದೆ.
  • ಇದು ಕಡಿಮೆ ತಾಪಮಾನದಲ್ಲೂ ಹರಳುಗಟ್ಟುವುದಿಲ್ಲ.

ಇದು ಪೊಟ್ಯಾಸಿಯಮ್ ಮತ್ತು ಗಂಧಕವನ್ನು ಒಳಗೊಂಡಿದೆ:

  • ಪೊಟ್ಯಾಸಿಯಮ್ (K2O): ಶೇ. 25 ರಷ್ಟು (w/w)
  • ಗಂಧಕ (S): ಶೇ. 17 ರಷ್ಟು (w/w)
ಬೆಳೆಯ ಗುಣಮಟ್ಟ

  • ಏಕರೂಪದ ಹಣ್ಣಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  • ಪ್ರೋಟೀನ್ ಉತ್ಪಾದನೆ ಮತ್ತು ಅದರ ಗುಣಮಟ್ಟವನ್ನು ಹೆಚ್ಚಿಸುತ್ತದೆ.
  • ಪರಿಸರದ ಒತ್ತಡಕ್ಕೆ (Environmental stress) ಬೆಳೆಯ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಸಸ್ಯದೊಳಗೆ ಸಕ್ಕರೆ ಮತ್ತು ಪಿಷ್ಟದ ವರ್ಗಾವಣೆಗೆ ಸಹಾಯ ಮಾಡುತ್ತದೆ.

ಆಕ್ಟಿವ್ ಥಿಯೋಸಲ್ಫೇಟ್

  • ಉತ್ತಮ ದ್ಯುತಿಸಂಶ್ಲೇಷಣೆಗಾಗಿ ಪತ್ರಹರಿತ್ತು (Chlorophyll) ಅಂಶವನ್ನು ಹೆಚ್ಚಿಸುತ್ತದೆ.
  • ಸಸ್ಯಗಳಲ್ಲಿನ ಕಿಣ್ವಗಳು ಮತ್ತು ಜೀವಸತ್ವಗಳ ಸಂಶ್ಲೇಷಣೆಗೆ ಬೆಂಬಲ ನೀಡುತ್ತದೆ.
  • ಸಸ್ಯಗಳು ಪೋಷಕಾಂಶಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ರಸಗೊಬ್ಬರದ ದಕ್ಷತೆಯನ್ನು ಉತ್ತಮಗೊಳಿಸುತ್ತದೆ.
  • ಮಣ್ಣಿನಲ್ಲಿ ರಂಜಕ ಮತ್ತು ಲಘು ಪೋಷಕಾಂಶಗಳ ಲಭ್ಯತೆಯನ್ನು ಸುಧಾರಿಸುತ್ತದೆ.

ಪೋಷಕಾಂಶಗಳ ಹೀರುವಿಕೆ

  • ಸಾಂಪ್ರದಾಯಿಕ ಪೊಟ್ಯಾಸಿಯಮ್ ಗೊಬ್ಬರಗಳಿಗೆ ಹೋಲಿಸಿದರೆ ಪೊಟ್ಯಾಸಿಯಮ್ ಹೀರುವಿಕೆ ಇದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
  • ದ್ರಾಕ್ಷಿ, ದಾಳಿಂಬೆ, ಬಾಳೆ, ಟೊಮೆಟೊ, ಲಿಂಬೆ ಜಾತಿಯ ಹಣ್ಣಿನ ಬೆಳೆಗಳು (Citrus), ತರಕಾರಿ ಬೆಳೆಗಳು ಮತ್ತು ಹೂವಿನ ಬೆಳೆಗಳು.
Mahadhan SMARTEK