ಸಲ್ಫರ್ ನ ಪ್ರಾಮುಖ್ಯತೆ ಮತ್ತು ಕಬ್ಬಿನ ಬೆಳೆಯಲ್ಲಿ ಸಲ್ಫರ್ ನ ಪಾತ್ರ

ಸಲ್ಫರ್ ನ ಪ್ರಾಮುಖ್ಯತೆ ಮತ್ತು ಕಬ್ಬಿನ ಬೆಳೆಯಲ್ಲಿ ಸಲ್ಫರ್ ನ ಪಾತ್ರ
March 8, 2019 Comments Off on ಸಲ್ಫರ್ ನ ಪ್ರಾಮುಖ್ಯತೆ ಮತ್ತು ಕಬ್ಬಿನ ಬೆಳೆಯಲ್ಲಿ ಸಲ್ಫರ್ ನ ಪಾತ್ರ Blog admin

ಬೆಳೆ ಪೋಷಣೆಯಲ್ಲಿ ಬೆಳೆಯ ಸಂಪೂರ್ಣ ಕಾಲಾವಧಿ ಯಲ್ಲಿ 16 ತರಹದ ಪೋಷಕಾಂಶಗಳು ಬೇಕು. ಅದರಲ್ಲಿ ಸಾರಜನಕ ರಂಜಕ ಮತ್ತು ಪೊಟ್ಯಾಷ್ ಪ್ರಮುಖವಾದವು. 4ನೆಯ ಪ್ರಮುಖ ಪೋಷಕಾಂಶವೆಂದರೆ ಅದು ಗಂಧಕ( ಸಲ್ಫರ್ ). ಹಸಿರು ಕ್ರಾಂತಿಯ ನಂತರದ ದಿನಗಳಲ್ಲಿ ಹೆಚ್ಚು ಇಳುವರಿಯ ತಳಿಗಳನ್ನು ಉಪಯೋಗಿಸುವುದರಿಂದ, ಹೆಚ್ಚು ಉತ್ಪಾದನೆಯನ್ನು ತೆಗೆಯುತ್ತಿರುವುದರಿಂದ, ಯಥೇಚ್ಛವಾಗಿ ನೀರಾವರಿ ನೀರನ್ನು ಉಪಯೋಗಿಸುತ್ತಿರುವುದರಿಂದ ಹಾಗು ಅಸಮತೋಲಿತ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಮಣ್ಣಿನಲ್ಲಿ ಗಂಧಕದ ಕೊರತೆಯು ಕಂಡುಬರುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಇತ್ತೀಚಿನ ವರದಿಗಳ ಪ್ರಕಾರ 25-35 % ಮಣ್ಣಿನಲ್ಲಿ ಗಂಧಕದ ಕೊರತೆಯು ಕಂಡುಬಂದಿದೆ.

ಗಂಧಕದ ಉಪಯೋಗಗಳು

1)ಪೋಷಣೆ :

 • ಸಸ್ಯದಲ್ಲಿ ಪತ್ರಹರಿತ್ತಿನ ಅಂಶವನ್ನು ಹೆಚ್ಚಿಸುತ್ತದೆ ಇದರಿಂದ ಸಸ್ಯದಲ್ಲಿನ ದ್ಯುತಿಸಂಶ್ಲೇಷಣ ಕ್ರಿಯೆಯು ಹೆಚ್ಚಾಗಿ ಸಸ್ಯದಲ್ಲಿ ಶರ್ಕರ ಪಿಷ್ಠಗಳು, ಸಕ್ಕರೆ ಅಂಶ , ಪ್ರೋಟೀನ್ ಮತ್ತು ವಿಟಮಿನ್ ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ
 • ಬೆಳೆಗಳಲ್ಲಿ ಸಕ್ಕರೆ ಅಂಶ ಮತ್ತು ಎಣ್ಣೆಯ ಅಂಶವನ್ನು ಹೆಚ್ಚಿಸುತ್ತದೆ.
 • ಸಸ್ಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 

2) ಮಣ್ಣಿನ ಗುಣವರ್ಧಕ :

 • ಮಣ್ಣಿನ ರಸಸಾರವನ್ನು ಸುಧಾರಿಸುತ್ತದೆ. ಕ್ಷಾರೀಯ ಗುಣ ಹೊಂದಿರುವ ಮಣ್ಣಿನಲ್ಲಿ ಕ್ಷಾರೀಯತೆಯನ್ನು ಕಡಿಮೆಮಾಡಿ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
 • ಮಣ್ಣನ್ನು ಹಗುರ ಮತ್ತು ಸಡಿಲಗೊಳಿಸುವುದರಿಂದ ಮಣ್ಣಿನ ಗುಣಧರ್ಮವು ಹೆಚ್ಚುತ್ತದೆ.
 • ರಂಜಕ ಮತ್ತು ಪೊಟ್ಯಾಷ್ ಪೋಷಕಾಂಶಗಳು ಮಣ್ಣಿನಲ್ಲಿ ಸ್ಥಿರೀಕೊಳ್ಳುವುದನ್ನು ಕಡಿಮೆ ಮಾಡುತ್ತದೆ.

 

3) ಪೋಷಕಾಂಶಗಳ ಚಲನಶೀಲತೆಯನ್ನು ಹೆಚ್ಚಿಸುತ್ತದೆ.

 • ಸಸ್ಯಗಳಿಂದ ಎನ್. ಪಿ. ಕೆ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
 • ಮಣ್ಣಿನಲ್ಲಿ ಇರುವ ಇತರೆ ಮಧ್ಯಮ ಮತ್ತು ಲಘು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವು ಹೆಚ್ಚುತ್ತದೆ.
 • ಇಳುವರಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

 

ಹೀಗಾಗಿ ಬೆಳೆಗಳಲ್ಲಿ ಗಂಧಕದ ಮಹತ್ವವನ್ನು ಅರಿತು ನಮ್ಮ ಮಹಾಧನ ಕಂಪನಿಯು 25 ವರ್ಷಗಳ ಹಿಂದೆಯಿಂದಲೂ ಗಂಧಕವನ್ನು ಹೊಂದಿದ ಬೆನ್ಸಲ್ಫ್ ರಸಗೊಬ್ಬರವನ್ನು ರೈತರಿಗೆ ನೀಡಿ ರೈತರು ಹಿಚ್ಚಿನ ಇಳುವರಿಯನ್ನು ಪಡೆಯಲು ಸಹಕಾರಿಯಾಗಿದೆ. ಈಗ ಈ ಬೆನ್ಸಲ್ಫ್ ರಸಗೊಬ್ಬರವನ್ನು ಹೊಸ ತಂತ್ರಜ್ನ್ಯಾನ ದಿಂದ ಕೂಡಿದ FRT ಬೆನ್ಸಲ್ಫ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಹೊಸ FRT ಬೆನ್ಸಲ್ಫ್ ನ ಉಪಯೋಗಗಳು :
FRT -ಫಾಸ್ಟ್ ರಿಲೀಸಿಂಗ್ ಟೆಕ್ನಾಲಜಿ ಹೊಂದಿದ ಬೆನ್ಸಲ್ಫ್ FRT ನಲ್ಲಿ 9೦% ಗಂಧಕವಿದ್ದು ೧೦% ಬೆಂಟೋನೈಟ್ ಮಣ್ಣಿನ ಹೊದಿಕೆ ಇರುತ್ತದೆ. FRT ಬೆನ್ಸಲ್ಫ್ ಮಣ್ಣಿನಲ್ಲಿನ ತೇವಾಂಶದ ಜೊತೆಗೂಡಿದಾಗ ಬೆಂಟೊನೈಟ್ ಅಂಶವು ಅದರ 20 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ತೇವಾಂಶವನ್ನು ಹೀರಿ ಅದರಲ್ಲಿನ ಗಂಧಕದ ಅಂಶಗಳನ್ನು ಚಿಕ್ಕ ಚಿಕ್ಕ ಕಣಗಳಾಗಿ ವಿಭಜನೆ ಮಾಡುತ್ತದೆ. ತದನಂತರ ಚಿಕ್ಕ ಗಂಧಕದ ಕಣಗಳು ಮಣ್ಣಿನಲ್ಲಿನ ಆಮ್ಲಜನಕ ಮತ್ತು ಬ್ಯಾಕ್ಟೀರಿಯಾಗಳಾದ ಥಯೊಬ್ಯಾಸಿಲಸ್ ಮತ್ತು ಅಸಿಡೊಬ್ಯಾಸಿಲಸ್ ಜೊತೆ ರಾಸಾಯನಿಕ ಪ್ರಕ್ರಿಯೆಗೆ ಒಳಪಟ್ಟು ತ್ವರಿತಗತಿಯಲ್ಲಿ ಸಲ್ಟೇಟ್ ರೂಪದಲ್ಲಿ ಮಾರ್ಪಡುತ್ತದೆ ಹಾಗು ಈ ರೂಪದಲ್ಲಿ ಸಸ್ಯಗಳು ಗಂಧಕವನ್ನು ಹೀರಿಕೊಳ್ಳುತ್ತವೆ.

ಕಬ್ಬಿನ ಬೆಳೆಯಲ್ಲಿ ಬೆನ್ಸಲ್ಫ್ ಅನ್ನು ಉಪಯೋಗಿಸುವ ಪ್ರಮಾಣ
ಕಬ್ಬು ಬೆಳೆಯಲ್ಲಿ ಪ್ರತೀ ಎಕರೆಗೆ 30 ಕೆಜಿ ಬೆನ್ಸಲ್ಫ್ಅನ್ನು ಉಪಯೋಗಿಸಬೇಕಾಗುತ್ತದೆ. ಇದನ್ನು ನಾವು ಎರಡು ಹಂತಗಳಲ್ಲಿ ಕೊಡಬಹುದು. ಮೊದಲನೆಯ ಹಂತ ಅಡಿಗೊಬ್ಬರ ಅಥವಾ ತಳಗೊಬ್ಬರವನ್ನು ಕೊಡುವ ಸಮಯದಲ್ಲಿ 10ಕೆಜಿ ಪ್ರತಿ ಎಕರೆಗೆ ಮತ್ತು ಸಾಲು ಮಾಡಿ ಮಣ್ಣೇರಿಸುವ ಸಮಯದಲ್ಲಿ 20 ಕೆಜಿ ಬೆನ್ಸಲ್ಫ್ ಅನ್ನು ಕೊಡಬೇಕು.

ಕಬ್ಬು ಬೆಳೆಯಲ್ಲಿ ಸಲ್ಫರ್ ನ ಮಹತ್ವ.

 • ಕಬ್ಬಿನಲ್ಲಿ ಬೆನ್ಸಲ್ಫ್ ಅನ್ನು ಕೊಡುವುದರಿಂದ ತ್ವರಿತವಾಗಿ ಮತ್ತು ತುಂಬಾ ದಿನಗಳವರೆಗೆ ಗಂಧಕವು ಕಬ್ಬಿಗೆ ದೊರಕುತ್ತದೆ.
 • ಮಣ್ಣಿನ ರಸಸಾರವನ್ನು ಸರಿಪಡಿಸಿ ಮಣ್ಣಿನಲ್ಲಿಯ ಕ್ಷಾರೀಯ ಅಂಶವನ್ನು ಕಡಿಮೆ ಮಾಡಿತ್ತದೆ. ಇದರಿಂದ ಮಣ್ಣಿನಲ್ಲಿಯ ಇತರೆ ಪೋಷಕಾಂಶಗಳು ಕಬ್ಬಿನ ಬೆಳೆಗೆ ದೊರಕುತ್ತದೆ.
 • ಬೆನ್ಸಲ್ಫ್ ಅನ್ನು ಉಪಯೋಗಿಸುವುದರಿಂದ ಕಬ್ಬಿನಲ್ಲಿ ಇತರೆ ಪೋಷಕಾಂಶಗಳ ಚಲಶೀಲತೆ ಮತ್ತು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
 • ಗಂಧಕವು ತ್ವರಿತವಾಗಿ ಮತ್ತು ಹೆಚ್ಚಿನ ಸಮಯದವರೆಗೆ ಕಬ್ಬಿನ ಎಲ್ಲಾ ಬೆಳವಣಿಗೆಯ ಹಂತದಲ್ಲಿಯೂ ದೊರಕುತ್ತದೆ. ಇದರಿಂದ ಗಂಧಕದ ಕೊರತೆಯು ನೀಗುತ್ತದೆ.
 • ತ್ವರಿತವಾಗಿ ಗಂಧಕವು ಲಭ್ಯವಾಗುವುದರಿಂದ ಕಬ್ಬು ದಷ್ಟಪುಷ್ಟ ವಾಗಿ ಗಟ್ಟಿಮುಟ್ಟಾಗಿ ಬೆಳೆಯುತ್ತದೆ.
 • ಮಣ್ಣಿನ ಗುಣಧರ್ಮವನ್ನು ಸುಧಾರಿಸಿ ಮಣ್ಣಿನಲ್ಲಿ ನೀರು ಮತ್ತು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
 • ಕಬ್ಬಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 • ಕಬ್ಬಿನಲ್ಲಿ ಸಕ್ಕರೆ ಮತ್ತು ಸಿಹಿ ರಸದ ಅಂಶವನ್ನು ಹೆಚ್ಚಿಸಿ ತೂಕವನ್ನು ಹೆಚ್ಚಿಸುತ್ತದೆ. ಇದರಿಂದ ಸಕ್ಕರೆ ಉತ್ಪಾದನೆಯೂ ಸಹ ಹೆಚ್ಚುತ್ತದೆ ಮತ್ತು ರೈತರು ಹೆಚ್ಚಿನ ಲಾಭಂಶವನ್ನು ಪಡೆಯಲು ಬೆನ್ಸಲ್ಫ್ ಸಹಕಾರಿಯಾಗಿದೆ.
About The Author
Mahadhan SMARTEK
कॉलवर या योजनेविषयी अधिक माहितीकरिता कृपया हा फॉर्म भरा.
योजनेविषयी माहिती