ಕಬ್ಬಿನ ಬೆಳೆಯಲ್ಲಿ ರಸಗೊಬ್ಬರ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಹೇಗೆ?

ಕಬ್ಬಿನ ಬೆಳೆಯಲ್ಲಿ ರಸಗೊಬ್ಬರ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಹೇಗೆ?
March 27, 2019 Comments Off on ಕಬ್ಬಿನ ಬೆಳೆಯಲ್ಲಿ ರಸಗೊಬ್ಬರ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಹೇಗೆ? Blog admin

ಕಬ್ಬಿನ ಇಳುವರಿಯನ್ನು ಹೆಚ್ಚಿಸುವಲ್ಲಿ ರಸಗೊಬ್ಬರಗಳ ಬಳಕೆ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ರಸಗೊಬ್ಬರಗಳು ಪ್ರಮುಖ ಅಂಶವಾಗಿದ್ದು ಹೆಚ್ಚಿನ ಬೆಲೆಯದ್ದಾಗಿರುತ್ತವೆ. ಹಾಗಾಗಿ ಈ ರಸಗೊಬ್ಬರಗಳ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಬಹುಮುಖ್ಯ.

ಇತ್ತೀಚಿನ ವರದಿಗಳ ಪ್ರಕಾರ ನಾವು ಬಳಸುವ ಸಾರಜನಕದ ರಸಗೊಬ್ಬರಗಳಲ್ಲಿ ಕೇವಲ 30-50% ವರೆಗೆ ನಮ್ಮ ಬೆಳೆಗೆ ಉಪಲಬ್ಧವಾಗುತ್ತದೆ. ಅದೇರೀತಿ ರಂಜಕದ ಗೊಬ್ಬರಗಳಲ್ಲಿ ಕೇವಲ 20-30% ಮತ್ತು ಪೊಟ್ಯಾಷ್ ರಸಗೊಬ್ಬರಗಳಲ್ಲಿ 50% ನಮ್ಮ ಬೆಳೆಗೆ ಲಭ್ಯವಾಗುತ್ತದೆ. ಇಷ್ಟು ಕಡಿಮೆ ರಸಗೊಬ್ಬರ ಲಭ್ಯತೆಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವೆಂದರೆ –

  1. ಮಣ್ಣಿನಲ್ಲಿನ ಸಾವಯುವ ಅಂಶ
  2. ಮಣ್ಣಿನ ರಸಸಾರ
  3. ರಸಗೊಬ್ಬರ ಬಳಸುವ ವಿಧಾನ
  4. ರಸಗೊಬ್ಬರ ಹಾಕುವ ಸಮಯ
  5. ರಸಗೊಬ್ಬರದ ಆಯ್ಕೆ
  6. ಮಣ್ಣಿನ ಗುಣಧರ್ಮ… ಇತ್ಯಾದಿ…

ಹಾಗಾಗಿ ರಸಗೊಬ್ಬರ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಬಹುಮುಖ್ಯ. ಇದನ್ನು ಹೆಚ್ಚಿಸುವುದು ಹೇಗೆಂದರೆ

1) ನಾಟಿ ಮಾಡುವ ಮುಂಚೆ ಎಕರೆಗೆ 10-12 ಟನ್ ಪ್ರಮಾಣದಲ್ಲಿ ಸಾವಯುವ ಗೊಬ್ಬರಗಳನ್ನು ಉಪಯೋಗಿಸುವುದು ಅಥವಾ ಮಹಾಧನ ಸಿಟಿ ಕಾಂಪೋಸ್ಟ್ ಎಕರೆಗೆ 500-800 ಕೆಜಿ ಬಳಸುವುದು. ಮಣ್ಣಿನ ಸಾವಯುವ ಅಂಶವನ್ನು ಹೆಚ್ಚಿಸುವುದರಿಂದ ಮಣ್ಣಿನಲ್ಲಿ ತೇವಾಂಶ ಮತ್ತು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ ಹಾಗು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳಿಗೆ ದೊರೆಯುತ್ತವೆ.

2) ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರಗಳ ಬಳಕೆ :

ಕಬ್ಬನ್ನು ನಾಟಿ ಮಾಡುವ ಮೊದಲು ಮಣ್ಣಿನ ಪರೀಕ್ಷೆ ಅಗತ್ಯವಾಗಿ ಮಾಡಿಸಬೇಕು. ಇದರಿಂದ ನಮ್ಮ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಮತ್ತು ಕಡಿಮೆ ಇರುವ ಪೋಷಕಾಂಶದ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರ ಮುಖೇನ ನಮ್ಮ ಮಣ್ಣಿಗೆ ಬೇಕಾಗಿರುವ ಹಾಗು ಶಿಫಾರಿಸಿತ ಗೊಬ್ಬರಗಳನ್ನು ಬಳಸಬಹುದು. ಇದರಿಂದ ಗೊಬ್ಬರಗಳ ಮೇಲೆ ಮಾಡುವ ಖರ್ಚು ಕಡಿಮೆಯಾಗುತ್ತದೆ ಹಾಗು ಆವೈಜ್ಞಾನಿಕ ರೀತಿಯಲ್ಲಿ ರಸಗೊಬ್ಬರಗಳನ್ನು ಬಳಸಿ ಮಣ್ಣಿನ ಆರೋಗ್ಯ ಹಾಳಾಗುವುದು ಸಹಿತ ತಪ್ಪುತ್ತದೆ.

3) ಮಣ್ಣಿನ ರಸಸಾರವನ್ನು ಸರಿಪಡಿಸುವುದು :

ಮಣ್ಣಿನ ಪರೀಕ್ಷೆಯ ವರದಿಯಲ್ಲಿ ರಸಸಾರದ ಅಂಶವನ್ನು ತಿಳಿದು ರಸಸಾರದ ಅಂಶವನ್ನು ಸರಿಯಾದ ಪ್ರಮಾಣಕ್ಕೆ ಅಂದರೆ 6.5-7.5 ಈ ಪ್ರಮಾಣಕ್ಕೆ ತರಬೇಕು. ಈ ರಸಸಾರವು ಪೋಷಕಾಂಶಗಳ ಹೀರುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ರಸಸಾರವನ್ನು ಸರಿಪಡಿಸಲು ಎಕರೆಗೆ 500 ಕೆಜಿ ಜಿಪ್ಸಮ್ ಅಥವಾ ಮಣ್ಣಿನ ಗುಣವರ್ಧಕವಾದ ಮಹಾಧನ ಶಕ್ತಿ ಎಕರೆಗೆ 100 ಕೆಜಿ ಕಬ್ಬನ್ನು ನಾಟಿ ಮಾಡುವ ಮೊದಲು ಭೂಮಿಗೆ ಹಾಕಬೇಕು.

4) ಸಮತೋಲಿತ ರಸಗೊಬ್ಬರಗಳ ಬಳಕೆ :

ಪ್ರಧಾನ ಪೋಷಕಾಂಶಗಳಾದ ಸಾರಜನಕ , ರಂಜಕ ಮತ್ತು ಪೊಟ್ಯಾಷ್ ನ ಜೊತೆ ಮಧ್ಯಮ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಷಿಯಂ, ಸಲ್ಫರ್ ಹಾಗು ಲಘು ಪೋಷಕಾಂಶಗಳಾದ ಜಿಂಕ್, ಕಬ್ಬಿಣ, ಮ್ಯಾಂಗನೀಸ್ , ಬೋರಾನ್ ಇವುಗಳನ್ನು ಹೊಂದಿರುವ ರಸಗೊಬ್ಬರಗಳನ್ನು ಬಳಸಬೇಕು. ಇದರಿಂದ ಕಬ್ಬಿಗೆ ಬೇಕಾದ ಎಲ್ಲ ತರಹದ ಪೋಷಕಾಂಶಗಳ ಲಭ್ಯತೆಯಾಗುತ್ತದೆ ಹಾಗು ಗೊಬ್ಬರಗಳ ಸಮರ್ಥ ಬಳಕೆಯೂ ಸಹ ಹೆಚ್ಚುತ್ತದೆ.

ಮಧ್ಯಮ ಪೋಷಕಾಂಶಗಳಲ್ಲಿ ಗಂಧಕವು ಕಬ್ಬಿನ ಬೆಳೆಯಲ್ಲಿ ಬಹುಮುಖ್ಯ ಪೋಷಕಾಂಶವಾಗಿದ್ದು ಇದು ಮಣ್ಣಿನ ರಸಸಾರವನ್ನು ಸರಿಪಡಿಸುವುದಲ್ಲದೇ ಮಣ್ಣಿನಲ್ಲಿರುವ ಇತರೆ ಪೋಷಕಾಂಶಗಳ ಹೀರುವಿಕೆಯಲ್ಲಿ ಸಹಾಯಕಾರಿಯಾಗಿದೆ ಹಾಗು ಗಂಧಕವನ್ನು ಉಪಯೋಗಿಸುವುದರಿಂದ ಕಬ್ಬಿನಲ್ಲಿ ಸಕ್ಕರೆ ಸಿಹಿ ಅಂಶವೂ ಸಹ ಹೆಚ್ಚುತ್ತದೆ. ಗಂಧಕವನ್ನು ನಾವು ಮಹಾಧನ ಬೆನ್ಸಲ್ಫ್ FRT ಉತ್ಪನ್ನದ ಮುಖಾಂತರ ಕೊಡಬಹುದು, ಇದರಲ್ಲಿ 90% ಗಂಧಕದ ಪ್ರಮಾಣವಿದ್ದು 10% ಬೆಂಟೊನೈಟ್ ಮಣ್ಣಿನ ಹೊದಿಕೆ ಇರುತ್ತದೆ.

5) ರಸಗೊಬ್ಬರವನ್ನು ಹಾಕುವ ವಿಧಾನ :

ಸಾರಜನಕ ಮತ್ತು ಪೊಟ್ಯಾಷ್ ರಸಗೊಬ್ಬರಗಳನ್ನು ನಾವು ಶಿಫಾರಿಸಿತ ಪ್ರಮಾಣದಲ್ಲಿ ಹಂತ ಹಂತವಾಗಿ ವಿಭಜನೆ ಮಾಡಿ ಕೊಡಬೇಕು ಹಾಗು ಗೊಬ್ಬರಗಳನ್ನು ಸಾಲುಗಳಲ್ಲಿ ಹಾಕಿ ಮಣ್ಣು ಮುಚ್ಚಬೇಕು ಇದರಿಂದ ಗೊಬ್ಬರಗಳು ತ್ವರಿತವಾಗಿ ಬೆಳೆಗೆ ಲಭ್ಯವಾಗುತ್ತವೆ ಹಾಗು ಗೊಬ್ಬರಗಳು ಆವಿಯಾಗಿ ಪೋಲಾಗುವುದು ಕಡಿಮೆಯಾಗುತ್ತದೆ.

ರಂಜಕದ ಗೊಬ್ಬರಗಳನ್ನು ನಾವು ಕಬ್ಬನ್ನು ನಾಟಿ ಮಾಡುವದಕ್ಕಿಂತ ಮುಂಚೆ ಸಾಲುಗಳಲ್ಲಿ ಪಟ್ಟಿಯ ರೂಪದಲ್ಲಿ ಹಾಕಬೇಕು ಹಾಗು ಕಬ್ಬಿನ ಬೇರಿನ ವಲಯಕ್ಕೆ ಹತ್ತಿರವಿರಬೇಕು. ಹೀಗಿದ್ದಾಗ ರಂಜಕದ ಗೊಬ್ಬರಗಳು ಹೆಚ್ಚು ಅವಲಭ್ಯವಾಗುತ್ತವೆ ಹಾಗು ರಂಜಕದ ಸ್ಥಿರೀಕರಣಗೊಳ್ಳುವುದು ಕಡಿಮೆಯಾಗುತ್ತದೆ.

6) ರಸಗೊಬ್ಬರಗಳನ್ನು ಹಾಕುವ ಸಮಯ:

ಸಾರಜನಕ ಇರುವ ರಸಗೊಬ್ಬರಗಳನ್ನು ನಾವು ಕಬ್ಬು ಮರಿಯೊಡೆಯುವ ಹಂತದಲ್ಲಿ ಹಾಗು ಕಬ್ಬು ಶೀಘ್ರ ಬೆಳವಣಿಗೆಯ ಹಂತದಲ್ಲಿ ಕೊಡಬೇಕು. ಎರಡನೆಯ ಬಾರಿ 90-120 ದಿನಗಳಲ್ಲಿ ಕೊಡಬೇಕು. 120-140 ದಿನಗಳ ನಂತರ ಸಾರಜನಕ ಇರುವ ರಸಗೊಬ್ಬರಗಳನ್ನು ಕೊಡುವುದರಿಂದ ಕಬ್ಬಿನಲ್ಲಿ ಸಕ್ಕರೆ ಅಂಶವು ಕಡಿಮೆಯಾಗುತ್ತದೆ ಹಾಗಾಗಿ 140 ದಿನಗಳ ನಂತರ ಸಾರಜನಕ ಇರುವ ರಸಗೊಬ್ಬರಗಳನ್ನು ಬಳಸಬಾರದು.

ರಂಜಕದ ರಸಗೊಬ್ಬರದಲ್ಲಿನ ರಂಜಕ ಪೋಷಕಾಂಶವು ಕಡಿಮೆ ಚಲನಶೀಲವಾಗಿರುವುದರಿಂದ ಹಾಗು ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನಲ್ಲಿ ಸ್ಥಿರೀಕೊಳ್ಳುವುದರಿಂದ ಈ ರಸಗೊಬ್ಬರಗಳನ್ನು ಅಡಿಗೊಬ್ಬರವಾಗಿ ಬೇರಿನ ವಲಯಕ್ಕೆ ಹತ್ತಿರದಲ್ಲಿ ಹಾಕಬೇಕು. ಇದರಿಂದ ಕಬ್ಬಿನ ಬೆಳೆಗೆ ರಂಜಕದ ಲಭ್ಯತೆ ಹೆಚ್ಚುತ್ತದೆ.

ಪೊಟ್ಯಾಷ್ ಯುಕ್ತ ರಸಗೊಬ್ಬರಗಳನ್ನು ನಾವು ಸಾರಜನಕ ರಸಗೊಬ್ಬರದ ಜೊತೆಯಲ್ಲಿ ಮಿಶ್ರಣ ಮಾಡಿ ಕಬ್ಬಿಗೆ ಹಂತ ಹಂತ ವಾಗಿ 45 ಮತ್ತು 90 ದಿನಗಳಲ್ಲಿ ಕೊಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳಲ್ಪಡುತ್ತದೆ.

7) ಸ್ಮಾರ್ಟೆಕ್ ರಸಗೊಬ್ಬರಗಳನ್ನು ಉಪಯೋಗಿಸುವುದು :

ನಮ್ಮ ಮಹಾಧನ ಕಂಪನಿಯವತಿಯಿಂದ ಹೊಸ ಸ್ಮಾರ್ಟೆಕ್ ತಂತ್ರಜ್ಞಾನದಿಂದ ತಯಾರಿಸಿದ ಸ್ಮಾರ್ಟೆಕ್ ರಸಗೊಬ್ಬರಗಳನ್ನು ಉಪಯೋಗಿಸುವುದರಿಂದ ರಸಗೊಬ್ಬರಗಳ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಈ ರಸಗೊಬ್ಬರಗಳಲ್ಲಿ ರಾಸಾಯನಿಕ ರಸಗೊಬ್ಬರಗಳ ಮೇಲೆ ಸಾವಯುವ ಅಂಶವಿರುವ ಆಮ್ಲಗಳನ್ನು ಲೇಪನ ಮಾಡಿರುತ್ತದೆ, ಇದರಿಂದ ಕಬ್ಬಿನಲ್ಲಿ ಪ್ರಾರಂಭಿಕ ಹಂತದಲ್ಲಿ ಬಿಳಿ ಬೇರುಗಳ ಹೆಚ್ಚುತ್ತವೆ ಹಾಗು ರಸಗೊಬ್ಬರದಲ್ಲಿನ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ, ಹಾಗು ಈ ಲೇಪನದ ಕಾರಣದಿಂದಾಗಿ ರಸಗೊಬ್ಬರಗಳು ಆವಿಯಾಗಿ ಪೋಲಾಗುವುದು ಸಹಿತ ಕಡಿಮೆಯಾಗುತ್ತದೆ. ಈ ತಂತ್ರಜ್ಞಾನದ ರಸಗೊಬ್ಬರಗಳು ಮಹಾಧನ 10:26:26,12:32:16 ಹಾಗು 20:20:0:13 ರಸಗೊಬ್ಬರ ಶ್ರೇಣಿಗಳಲ್ಲಿ ಲಭ್ಯವಿದೆ.

8) ಜೈವಿಕ ರಸಗೊಬ್ಬರಗಳ ಬಳಕೆ :

ಸಾರಜನಕವನ್ನು ಸ್ಥಿರೀಕರಿಸುವ ಸೂಕ್ಷ್ಮಾಣುಜೀವಿಗಳಾದಂತಹ ಅಝೋಸ್ಪಿರಿಲಮ್ , ಅಜ್ಟೊಬ್ಯಾಕ್ಟರ್ , ರಂಜಕವನ್ನು ಕರಗಿಸುವಂತಹ ಸೂಕ್ಷ್ಮಾಣುಜೀವಿಗಳಾದ ಬ್ಯಾಸಿಲ್ಲಸ್ ಪಾಲಿಮಿಕ್ಸಾ, ಬ್ಯಾಸಿಲ್ಲಸ್ ಮೆಗಾಥೋರಿಯಂ , ಸುಡೋಮೋನಾಸ್ ಸ್ಟ್ರೀಯೇಟಾ ಇತ್ಯಾದಿ ಹಾಗು ಪೊಟ್ಯಾಷ್ ಅನ್ನು ಚಲನಶೀಲ ಮಾಡುವ ಫ್ರುಟೇರಿಯಾ ಔರಿಂಶಿಯಾ ಇವುಗಳನ್ನು 10 ಕೆಜಿ ಪ್ರತಿ ಎಕರೆಗೆ ಸಾವಯುವ ಗೊಬ್ಬರಗಳ ಜೊತೆ ಮಿಶ್ರಣ ಮಾಡಿ ಕಬ್ಬು ನಾಟಿ ಮಾಡುವ 15 ದಿನಗಳ ಮುಂಚೆ ಮಣ್ಣಿಗೆ ಹಾಕುವುದರಿಂದ ಪೋಷಕಾಂಶಗಳು ಮಣ್ಣಿನಲ್ಲಿ ಬೇಗ ಕರಗಿ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಕಬ್ಬು ಬೆಳೆಗೆ ದೊರೆಯುತ್ತದೆ.

ಈ ಮೇಲಿನ ಪದ್ದತಿಗಳನ್ನು ಅನುಸರಿಸುವುದರಿಂದ ಕಬ್ಬು ಬೆಳೆಯಲ್ಲಿ ರಸಗೊಬ್ಬರ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದು.

About The Author
Mahadhan SMARTEK
One stop solution
for all
farming needs
Download Mahadhan App